Tuesday, 16 December 2014

ಬನ್ನಿ ನಮ್ಮೂರಿಗೆ


ಕಾಸರಗೇೂಡಿನಲ್ಲಿರುವ ಪ್ರಸಿದ್ದವಾದ ದೇವಾಲಯಗಳಲ್ಲೊಂದಾಗಿದೆ ಅನಂತಪುರ ದೇವಾಲಯ.500 ಚದರ ಅಡಿ ವಿಸ್ತೀರ್ಣದ ಕೆರೆಯ ಮದ್ಯದಲ್ಲಿ ನೆಲೆಗೊಂಡಿರುವ ಕೇರಳದ ಏಕೈಕ ದೇವಾಲಯ ಇದಾಗಿದೆ.ಪುರಾಣದ ಪ್ರಕಾರ ಅನಂತಪದ್ಮನಾಭನ ಮೂಲ ಸ್ಥಾನ ಇದಾಗಿದೆ.

ಇಲ್ಲಿ ಬಬಿಯಾ ಎಂದು ಹೆಸರಿರುವ ಮೊಸಳೆ ಇರುವುದು ಇಲ್ಲಿಯ ಮುಖ್ಯ ವಿಶೇಷತೆ.ಅಂದಿನ ಕಾಲದಲ್ಲಿ ಬ್ರಿಟೀಷರು ಮೊಸಳೆ  ಇರುವ ವಿಷಯ ತಿಳಿದು ಬಬಿಯಾ ಎಂದು ಕೂಗಿ ಕರೆದಾಗ ಬಂದು ದರ್ಶನ ಕೊಟ್ಟಾಗ ಸೈನಿಕರಲ್ಲೊಬ್ಬ ಗುಂಡುಹಾರಿಸಿ ಮೊಸಳೆಯನ್ನು ಕೊಂದು ಬಿಟ್ಟನಂತೆ ,ಮುಂದೆ ಆ ಸೈನಿಕ ದೇವಾಲಯದಿಂದ ಹೊರಗೆ ಕಾಲಿಡುವ ಮೊದಲೆ ಸರ್ಪ ಕಚ್ಚಿ ಮೃತಪಟ್ಟನಂತೆ.ಅನಂತರ ಈ ಕೆರೆಯಲ್ಲಿ ಇನ್ನೊಂದು ಮೊಸಳೆ ಕಾಣಿಸಿಕೊಂಡಿದೆ.ಅದುವೇ ಈಗಿರುವ ಬಬಿಯಾ ಹೆಸರಿನ ಮೊಸಳೆ.ಪ್ರತಿ ದಿನ ಪೂಜೆಯ ಸಮಯದಲ್ಲಿ ಬಬಿಯಾ ನೈವೇದ್ಯ ಸ್ವೀಕರಿಸಲು ಬಂದೆ ಬರುತ್ತದೆ.(ಕೆಳಗಿನ ಫೇೂಟೊದಲ್ಲಿ ದೇವಾಲಯದ ಹಿಂಬಾಗದಲ್ಲಿ ಬಬಿಯಾದ ಚಿತ್ರವನ್ನು  ಕಾಣಬಹುದು)
ಈ ದೇವಾಲಯವೂ 9ನೇ ಶತಮಾನದಲ್ಲಿ ಕಟ್ಟಲಾಗಿದೆ.ಅತ್ಯಂತ ವಿಸ್ತಾರವಾದ ಕೆರೆಯ ಮದ್ಯದಲ್ಲಿ ನಿರ್ಮಿಸಲಾದ ಈ ಕ್ಷೇತ್ರವನ್ನು ಸರೇೂವರ ಕ್ಷೇತ್ರ,ಏಕಾಂಗಿ ಮೊಸಳೆ ಹೊಂದಿರುವ ಕ್ಷೇತ್ರದಿಂದಲೇ ಪ್ರಸಿದ್ದಿಯಾಗಿದೆ.ಕೆರೆ ಹಾಗೂ ದೇವಾಲಯದ ಸುತ್ತಲೂ 12ಅಡಿ ಎತ್ತರದ ಕಲ್ಲಿನ ಕೇೂಟೆಯಿದೆ.ಈ ಕೇೂಟೆಗೆ ಸುಮಾರು 1000 ವರ್ಷಗಳ ಇತಿಹಾಸ ಇದೆ ಎಂಬೇೂದು ಸಂಶೇೂಧಕರ ಅಭಿಪ್ರಾಯ.
ಸುಂದರವಾಗಿ ಕೆತ್ತಿರುವ ಮೆಟ್ಟಲುಗಳ ಮೂಲಕ ಕೆಳಗಿಳಿದು ಸಂಕದ ಮೂಲಕ ನಡೆದು ಸಾಗುವಾಗ ಕಾಣುವ ಮೀನುಗಳ ಗುಂಪು ತನು-ಮನವನ್ನು ಸಂತಸಗೊಳಿಸುತ್ತದೆ.ಸಂಕದ ಮೂಲಕ ಸಾಗಿ ದೇವರ ದರ್ಶನ ಪಡೆಯುವುದು ಇಲ್ಲಿ ಮಾತ್ರ ಸಿಗಬಹುದಾದ ದಿವ್ಯಾನುಭವವಾಗಿದೆ.
ಬಿಲ್ವಮಂಗಲ ಋಷಿ 2000ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಋಷಿ ತನ್ನ ಸಹಾಯಕ್ಕೆ ಓರ್ವ ಬಾಲಕನನ್ನು ತನ್ನ ಜೊತೆ ಯಲ್ಲಿರಿಸಿಕೊಂಡಿದ್ದನು.ಈ ಬಾಲಕ ಚೇಷ್ಟೆಮಾಡಿದಾಗ ಮುನಿಗಳು ಮುನಿದು ಆತನನ್ನು ಎಡಕೈಯಿಂದ ತಳ್ಳಿದರು .ಬಾಲಕ ಬಿದ್ದ ಸ್ಥಳ ಗುಹೆಯಾಗಿ ಆತ ಅದರಲ್ಲಿ ಕಣ್ಮರೆಯಾದನಂತೆ .ಆ ಬಾಲಕ ಸಾಕ್ಷಾತ್ ಮಹಾವಿಷ್ನು ಎಂದು ಅರಿತ ಮುನಿಗಳು ಗುಹೆಯ ಮೂಲಕ ತೆರಳಿದಾಗ ಅನಂತಕಾಡು ಎಂಬಲ್ಲಿ ಬಾಲಕ ಕಂಡು ಬಂದನಂತೆ ಬಳಿಕ ಬಾಲಕ ಕುಳಿತ ಸ್ಥಳದಲ್ಲೇ ಅನಂತಪದ್ಮನಾಭ ದೇವಾಲಯ ನಿರ್ಮಿಸಲಾಯಿತು ಎಂಬುದು ಐತಿಹ್ಯ.ಕ್ಷೇತ್ರದ ಕೆರೆಯಲ್ಲಿ ಸುರಂಗ ಮಾರ್ಗವಿದ್ದು ಅದರಿಂದ ತಿರುವನಂತಪುರದಲ್ಲಿರುವ ಅನಂತಪದ್ಮನಾಭ ದೇವಾಲಯವನ್ನು ತಲುಪಬಹುದು ಎಂಬೂದು ನಂಬಿಕೆ.ಇತ್ತಿಚೆಗೆ ಅನಂತಪದ್ಮನಾಭ ಕ್ಷೇತ್ರ ಭಾರಿ ಪ್ರಸಿದ್ದಿಯಾಗಿತ್ತು.


Saturday, 22 November 2014

ಬೇಡಿಕೆ

ಇವತ್ತು ನಾನು ಏನೂ ಬರೆಯೇೂದಿಲ್ಲ .ಮನಸ್ಸೆಲ್ಲಾ ಖಾಲಿ ಖಾಲಿ ಆದ್ದರಿಂದ ಇವತ್ತಿಗೆ ಸ್ವಲ್ಪ ವಿರಾಮ .ಇತ್ತೀಚೆಗಷ್ಟೆ ಬ್ಲಾಗ್ ಶುರುಮಾಡಿದ್ದೇನೆ .ಆದ್ದರಿಂದ ಏನು ಬರೆಯಲಿ ಎಂದು confusion .ನಾನು ಜೀವನದಲ್ಲಿ ಕನ್ನಡ ಉಪಯೇೂಗಿಸಿರೇೂದು ತುಂಬಾ ಕಡಿಮೆ ಅನ್ನಬಹುದು,ಕೇೂಪ ಮಾಡಬೇಡಿ  friends . SSLCವರೆಗೆ ನಾನು ಕನ್ನಡ ಮಾದ್ಯಮದಲ್ಲೆ ಶಿಕ್ಷಣ ಮಾಡಿದ್ದೇನೆ.ಅದರಲ್ಲಿ ನನಗೆ ಹೆಮ್ಮೆಇದೆ.ಆದ್ರೆ ನಮ್ಮ ಮನೆಯಲ್ಲಿ  ಎಲ್ಲರೂ ಮಲಯಾಳ ದಲ್ಲೆ ಶಿಕ್ಷಣ ಮುಗಿಸಿದ್ದಾರೆ.ಮಾತನಾಡೇೂದು ಮಲಯಾಳ, ಅದೂ ಅಲ್ಲದೆ ನನ್ನ ಎಲ್ಲಾ ಗೆಳೆಯ-ಗೆಳತಿಯರು ಮಲಯಾಳಿಗಳೆ .ಕೇರಳದಲ್ಲಿ ತಾನೆ ಇರೇೂದು.ಅದು ಅಲ್ಲದೆ ಇಲ್ಲಿ ಕನ್ನಡ  ಪುಸ್ತಕಗಳು ಸಿಗೇೂದು ತುಂಬಾ ವಿರಳ ಅನ್ನಬಹುದು.ಕಥೆ ಹೇಳ್ ಕೊಂಡ್ ಹೇೂದ್ರೆ ಮುಗಿಯಲ್ಲ ಅನಿಸುತ್ತೆ.ಕವಿತೆಗಳಿಗಿಂತ ಕಥೆಗಳೆಂದರೆ ಸ್ವಲ್ಪ ಜಾಸ್ತಿ ಇಷ್ಟ.ಮೂಕಜ್ಜಿಯಕನಸುಗಳು,ಕಾನೂರು ಹೆಗ್ಗಡತಿ,ಸಂಸ್ಕಾರ,ಬೆಟ್ಟದ ಜೀವ,ನನಗ್ ಇಷ್ಟವಾದ ಕಾದಂಬರಿಗಳು.ಆದ್ರೆ ಇತ್ತೀಚಿನ ಲೇಖಕ-ಲೇಖಕಿಯರ ಬಗ್ಗೆ ಅವರ ಲೇಖನಗಳ ಬಗ್ಗೆ ನನಗೆ ಅಷ್ಟಾಗಿ ಅರಿವಿಲ್ಲ .blog ಇರೇೂದು  ಕಥೆ ,ಕವನ ಬರೆಯೇೂಕೆ ಮಾತ್ರ ಅಲ್ಲ friends ಗೆ ಸಹಾಯ ಮಾಡಲು ಕೂಡ ಅನ್ನುವುದು ನನ್ನ ನಂಬಿಕೆ.ಇತ್ತೀಚಿನ  ಲೇಖಕ-ಲೇಖಕಿಯರ ಬಗ್ಗೆ ಅವರ ಲೇಖನಗಳ ಬಗ್ಗೆ odishttu ಲಿಸ್ಟ್ ಕೊಡುತ್ತೀರಿ ತಾನೆ.friendsನಲ್ಲಿ ತಾನೆ request ಮಾಡೇೂದು ಸಹಾಯ ಮಾಡುತ್ತೀರಿ ಎಂಬ ನಂಬಿಕೆಯಿಂದ ಇಂದಿಗೆ ವಿರಾಮ,,,,,,

Wednesday, 12 November 2014

ಮನವು ಬಾರವೆನಿಸಿದೆ ಹೌದು, ಮನ ತುಂಬಾ ನೀನೆ. ಯಾಕೆ ನೀನು ನನ್ನ ಬಿಟ್ಟುದೂರ ಹೋಗೋದಿಲ್ಲ ಬೇಡ-ಬೇಡ ಎಂದರೂ ಯಾಕೆ ನೀನು ನನ್ನನು ಕಾಡುವೆ .ನಿನ್ನಿಂದ ನಾನು ಸೋತು ಹೋದೆ.ಮುಸ್ಸಂಜೆಯ ಮಂಜಿನ ನಡುವೆಯಿಂದ ಬಂದ ನೀ ಯಾರು .ಯಾಕಾಗಿ ನನ್ನ ಮೈ-ಮನ ತುಂಬಾ ಆವರಿಸಿದೆ............................. ....................................................................................................................................................................................................................................................................................................................................................... ಹೌದು ಜ್ಜರ ಬಂದ್ರೆ ಮತ್ತಿನ್ನೇನಾಗುತ್ತೆ  ಅಲ್ವಾ........


Wednesday, 5 November 2014

  ಮರೆಯಾಗಿ ಹೋದ ನನ್ ಗೆಳೆಯ Monday, 3 November 2014


  HAI FRIENDS                                          kannada typing ಕಲಿಯುತ್ತಾ ಇದ್ದೇನೆ ಆದ್ದರಿಂದ               kanglish ನಲ್ಲಿ type ಮಾಡ್ತ ಇದ್ದೇನೆ. ಮುಂದಿನ                 ಬರಹದಲಿ ಕನ್ನಡದಲ್ಲೆ type  ಮಾಡ್ತೆನೆ friends ,                 okkkkkkk .ಕಥೆ,ಕವನ ಅಂದ್ರೆ ತುಂಬಾನೆ ಇಷ್ಟ                   blogs ನಲ್ಲಿ ಕಥೆ,ಕವನ,memorable experience               etc ......ಓದಿ ತುಂಬಾನೆ ಇಷ್ಟವಾಯ್ತು.ನನಗೂ                     ಕೂಡ ಕವನ ,ಕಥೆ ಅಂದ್ರೆ ಅರೆ ಹುಚ್ಚು. ಅದಕ್ಕಾಗಿಯೆ              blog ಇಷ್ಟವಾಯ್ತು.exam start  ಆಗಿರೋದಿಂದ್ರ                 blogs ಗೆ ಸ್ವಲ್ಪ ವಿರಾಮ ಕೊಡ್ತ  ಇದ್ದೇನೆ.ಮುಂದಿನ               ಬರಹದವರೆಗೂ bye bye....

Saturday, 11 October 2014

ನೆನಪು

ನೆನಪು ನೆನಪಾಗೇ ಉಳಿಯೋದು ಮಾತು ಮೌನವಾದಗ